ಬಂಗಾರದ ಮನುಷ್ಯನ ಬಂಗಾರದ ನಾಣ್ಯಗಳು ಮುದ್ರರಿಸಿದವರು ಯಾರು? ಪೂರ್ತಿಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. Who printed gold coins on gold man Dr. Rajkumar ? Click here for full details.

 ವರ ನಟ ಕರುನಾಡ ಕಣ್ಮನ್ನಿ ನಮ್ಮ ಡಾ. ರಾಜ್ ಕುಮಾರ್ ಮುತ್ತಣ್ಣ ರವರ ಬಂಗಾರದ ನಾಣ್ಯ ಹಾಗೂ ಬೆಳ್ಳಿ ನಾಣ್ಯಗಳನ್ನು ಮುದ್ರಿಸಿದ್ದಾರೆ. 


ವರನಟ, ನಟ ಸಾರ್ವಭೌಮ ಕರುನಾಡ ಕಣ್ಮನ್ನಿ ಡಾ. ರಾಜ್ ಕುಮಾರ್ ಎಂದರೆ ಕನ್ನಡಿಗರ ಹೆಮ್ಮೆ. ಚಿತ್ರ ಪರಿಶ್ರಮದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ತನ್ನ ನಟನೆಯೊಂದಿಗೆ ಕಿರಿಯರಿಂದ ಹಿರಿಯರ ಮೆಚ್ಚಿನ ನಟ. ಇವರ ಕನ್ನಡ ನಾಡು ನುಡಿಯ ಮೇಲಿನ ಪ್ರೀತಿ ಸೇವೆ ಅಪಾರ. 

ಅಣ್ಣವರ ಸೇವೆಯನ್ನು ಉದ್ದೇಶಿಸಿ ಕಲೆಕ್ಟಿಬಲ್ ಮಿಂಟ್ ಕಂಪನಿಯು ತನ್ನದೇ ಅದ ಶೈಲಿಯಲ್ಲಿ ಗೌರವ ಸಲ್ಲಿಸಲು ಅಣ್ಣಾವ್ರ ಕುಟುಂಬದ ಅನುಮತಿಯನ್ನು ಪಡೆದುಕೊಂಡು, ಮುಂದಾಗಿರುವುದ ರಿಂದ ಕನ್ನಡಿಗರಿಗೆ ಸಂತೋಷದ ಸುದ್ದಿ ನೀಡಿದ್ದಾರೆ.

ಕಲೆಕ್ಟಿಬಲ್ ಮಿಂಟ್ ಕಂಪನಿಯು ಅಣ್ಣಾವ್ರ ಚಿತ್ರ ಇರುವ ಬಂಗಾರದ ಮತ್ತು ಬೆಳ್ಳಿಯ ನಾಣ್ಯಗಳನ್ನು ಮುದ್ರಣ ಮಾಡಿದೆ. ಅಣ್ಣಾವ್ರ ಚಿತ್ರವಿರುವ ಈ ಅಪರೂಪದ ನಾಣ್ಯಗಳಲ್ಲಿ ಅವರ ಹೆಸರನ್ನು ಕನ್ನಡ ಮತ್ತು ಆಂಗ್ಲ ಭಾಷೆ ಎರಡರಲ್ಲೂ ಕೂಡಾ ಬರೆಯಲಾಗಿದೆ. 

ಇದರಲ್ಲಿ ಚಿನ್ನದ ನಾಣ್ಯ 25 ಗ್ರಾಂ ತೂಕದ ಬಂಗಾರದ ನಾಣ್ಯವಾಗಿದೆ. ಬಂಗಾರದ ಈ ನಾಣ್ಯವನ್ನು ಮುದ್ರಿಸುವ ಮೂಲಕ ನಾಡಿನ ಬಂಗಾರದ ಮನುಷ್ಯ ಎನಿಸಿರುವ ಡಾ.ರಾಜ್ ಅವರಿಗೆ ಬಂಗಾರದ ಕಾಣಿಕೆ ನೀಡಿರುವುದು ನೋಡಿ ಅವರ ಅಭಿಮಾನಿಗಳಿಗೆ ಬಹಳ ಖುಷಿಯಾಗಿದೆ.

ವರನಟ ಡಾ.ರಾಜ್‌ಕುಮಾರ್ ಅವರು ಕನ್ನಡ ನಾಡಿನ ಹೆಮ್ಮೆಯ ನಟ. ಅವರನ್ನು ಅದೆಷ್ಟೋ ಪ್ರಶಸ್ತಿಗಳು ಅರಸಿ ಬಂದಿವೆ. ಅತ್ಯುನ್ನತ ಪ್ರಶಸ್ತಿಗಳ ಸಾಲಲ್ಲಿರುವ ದಾದಾ ಸಾಹೇಬ್ ಪಾಲ್ಕೆ, ಪದ್ಮ ಭೂಷಣ, ಕರ್ನಾಟಕ ರತ್ನ ಹೀಗೆ ಅನೇಕ ಪ್ರಶಸ್ತಿ ಗಳು ಅವರಿಗೆ ದಕ್ಕಿವೆ. ಈಗ ಅವರ ನೆನಪಿನಲ್ಲಿ ಮುದ್ರಣವಾಗಿರುವ ಈ ಬೆಳ್ಳಿ ಹಾಗೂ ಬಂಗಾರದ ನಾಣ್ಯಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿವೆ.

ಧನ್ಯವಾದಗಳು.

ಸ್ನೇಹಿತರೆ ಈ ಲೇಖನವನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ ಇನ್ನು ಹೆಚ್ಚು ಲೇಖನಗಳನ್ನು ಬರೆಯಲು ನಮಿಗೆ ಪ್ರೋತ್ಸಾಹ ಸಿಗುತ್ತದ್ದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು