ಯುವಕರು ದೇಶದ ಬೆನ್ನೆಲುಬು. ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಪ್ರಮುಖ ವಾಗಿರುತ್ತದೆ.
ಯುವಕರು ಪ್ರತಿಯೊಂದು ದೇಶದ ಭವಿಷ್ಯದ ಅತಿದೊಡ್ಡ ಆಸ್ತಿ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಯುವಕರು ನಿಜಕ್ಕೂ ದೇಶದ ಭವಿಷ್ಯ ಮತ್ತು ಅವರು ಪ್ರತಿಯೊಂದು ಹಂತದಲ್ಲೂ ದೇಶವನ್ನು ಪ್ರತಿನಿಧಿಸುತ್ತಾರೆ.
ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವು ಯೋಚನೆಗಿಂತಲು ಮುಖ್ಯವಾಗಿರುತ್ತದೆ.
ಒಂದು ರೀತಿಯಲ್ಲಿ ಹೇಳಬೇಕಾದರೆ ಯುವಕರು ಬುದ್ದಿವಂತ್ತಿಕೆ ಹಾಗೂ ಅವರ ಕೆಲಸಗಳು ದೇಶವನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನು ಸಮಾನವಾದ ಜವಾಬ್ದಾರರಾಗಿರುವುದರಿಂದ ಯುವಕರು ದೇಶ ಕಟ್ಟುವುದರಲ್ಲಿ ಕಟ್ಟಡದ ಇಟ್ಟಿಗೆ ಇದ್ದಹಾಗೆ.
ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವೇನು?
ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ದೊಡ್ಡದು. ಒಂದು ದೇಶವು ಅಭಿವೃದ್ಧಿ ಹಾಗೂ ಪ್ರಗತಿಯತ್ತ ಸಾಗಳು ಶ್ರಮಿಸುವ ಶಕ್ತಿಯನ್ನು ಹೊಂದಿರುವವರೆ ಆ ದೇಶದ ಯುವಕರು.
ಒಂದು ದೇಶದಲ್ಲಿ ರಾಷ್ಟ್ರದ ಭವಿಷ್ಯ ಹಾಗೂ ಸಾಮಾಜಿಕ ಸುಧಾರಣೆಯನ್ನು ತರುವ ಜವಾಬ್ದಾರಿ ಆ ದೇಶದ ಯುವಕರ ಕೆಲಸವಾಗಿರುತ್ತದ್ದೇ.
ನಾವು ಯುವಕರಿಗೆ ಹೇಗೆ ಸಹಾಯ ಮಾಡಬಹುದು?
ಇತ್ತೀಚಿನ ದಿನಗಳಲ್ಲಿ ಯುವಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಪ್ರತಿ ಕ್ಷೇತ್ರದಲ್ಲೂ ಸಮಾನ ಅವಕಾಶಗಳನ್ನು ನೀಡಬೇಕು ಹಾಗೆ ಅವರಿಗೆ ಯಶಸ್ವಿಯನ್ನು ಸಾಧಿಸಲು ಅವರಿಗೆ ಸವಾಲುಗಳನ್ನು ಸ್ವೀಕರಿಸಿ ಅದನ್ನು ಬಗೆಹರಿಸುವ ಬಗ್ಗೆ ಪ್ರೋತ್ಸಾಹಿಸಬೇಕು.
ಬಹಳಷ್ಟು ಯುವಕರಿಗೆ ಅವರ ಭವಿಷ್ಯದ ಬಗ್ಗೆ ತಾವು ನಡೆಯಬೇಕಾದ ಹೆಜ್ಜೆಯನ್ನು ಪ್ರೋತ್ಸಾಹಿಸಿ ಮಾರ್ಗದರ್ಶನವನ್ನು ನೀಡಬೇಕು.
ಇಂದಿನ ದಿನಗಳಲ್ಲಿ ಯುವಕರು ಕೆಟ್ಟಾಚಟಗಳಿಗೆ ಗುಲಮರಾಗಿದ್ದರೆ. ಆದಷ್ಟು ಅವರಿಗೆ ಕೆಟ್ಟಾಚಟಗಳಿಂದ ದೂರಮಾಡಿ ಅವರಿಗೆ ಜೀವನದ ಹಾಗೂ ತಮ್ಮ ಕರ್ತವ್ಯಗಳ ಕಡೆಗೆ ಸೆಳೆಯಬೇಕು ಎಂಬುದು ನಮ್ಮ ಆಶಯ.
ಧನ್ಯವಾದಗಳು.
ಸ್ನೇಹಿತರೆ ಈ ಲೇಖನವನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ ಇನ್ನು ಹೆಚ್ಚು ಲೇಖನಗಳನ್ನು ಬರೆಯಲು ನಮಿಗೆ ಪ್ರೋತ್ಸಾಹ ಸಿಗುತ್ತದ್ದೆ.


