ದಂಡ ಪಾವತಿಸಲಾಗದೇ ಜೈಲು ಸೇರಿದ ಬೈಕ್ ಸವಾರ.Bike rider jailed for failing to pay fine.

 ದಂಡ ಪಾವತಿಸಲಾಗದೇ ಜೈಲು ಸೇರಿದ ಬೈಕ್ ಸವಾರ.


ಚಿತ್ರದುರ್ಗ: ಕೋಟೆನಾಡಲ್ಲಿ ದಂಡ ಪಾವತಿಸಲಾಗದೇ ಜೈಲು ಸೇರಿದ ಬೈಕ್ ಸವಾರ.  ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕೋರ್ಟ್ (Court) ವಿಧಿಸಿದ್ದ ದಂಡ (Fine) ಕಟ್ಟಲಾಗದೇ ಬೈಕ್ (Bike) ಸವಾರ ಜೈಲು (Jail) ಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.


ಚಿತ್ರದುರ್ಗ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುವ ಕಾರ್ಮಿಕ ರವಿಕುಮಾರ್‌ ದಂಡ ಕಟ್ಟಲಾಗದ ವ್ಯಕ್ತಿ. ಫೆ. 2ರಂದು ಹೆಲ್ಮೆಟ್ ಇಲ್ಲದೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಿಸಿದ್ದ. ಹೀಗಾಗಿ‌ ಸಂಚಾರ ಠಾಣೆ ಪೊಲೀಸರು ಆತನ ವಿರುದ್ಧ ಅಪಾಯಕಾರಿ ಚಾಲನೆ ಹಾಗೂ ಹೆಲ್ಮೆಟ್‌ ಧರಿಸದೇ ಸಂಚಾರಿ ನಿಯಮಗಳ  ಉಲ್ಲಂಘನೆ ಕೇಸ್ ದಾಖಲಿಸಿದ್ದರು.

ಸಂಚಾರಿ ಠಾಣೆ ಪೊಲೀಸರು ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿ ಬೈಕ್ ಸವಾರ ರವಿಕುಮಾರನನ್ನು ಸಂಚಾರಿ ನಿಯಮ ಉಳಂಘನೆಯ ಅಡಿಯಲ್ಲಿ ವಶಕ್ಕೆ ಪಡೆದು, ನಂತರ ಚಿತ್ರದುರ್ಗ ಸಿಜೆಎಂ ಮತ್ತು ಜೆಎಂಎಫ್‌ಸಿ ಕೋರ್ಟ್‌ನಿಂದ‌‌ ಒಟ್ಟು 20,500 ರೂ. ದಂಡ ವಿಧಿಸಲಾಗಿತ್ತು. ಆದರೆ ಕಾರ್ಮಿಕ ರವಿಕುಮಾರ್‌ ದಂಡ ಕಟ್ಟಲಾಗಲು ಅಶಕ್ತನಾಗಿದ್ದ ಹಿನ್ನೆಲೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ 10,250ರೂ.ಗೆ ಇಳಿಸಲು ಕೋರ್ಟ್ ಆದೇಶಿಸಿತ್ತು.


ಆರೋಪಿ ರವಿಕುಮಾರ್‌ ದಂಡ ಕಟ್ಟಲಾಗದೇ ಜೈಲುಪಾಲಾಗಿದ್ದಾನೆ. ಸದ್ಯ ನಾಯಾಂಗ ಬಂಧನದಲ್ಲಿರುವ  ರವಿಕುಮಾರ್ ಡ್ರಿಂಕ್ ಡ್ರೈವ್ ಕೇಸ್‌ನಲ್ಲಿ ಜೈಲು ಸೇರಿರುವುದು ಮದ್ಯಪಾನ ಮಾಡಿ ವಾಹನ ಚಲಾಯಿಸುವವರಲ್ಲಿ ನಡುಕ ಹುಟ್ಟಿಸಿದೆ.






----ಧನ್ಯವಾದಗಳು----

ಸ್ನೇಹಿತರೆ ಈ ಲೇಖನವನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ ಇನ್ನು ಹೆಚ್ಚು ಲೇಖನಗಳನ್ನು ಬರೆಯಲು ನಮಗೆ ಪ್ರೋತ್ಸಾಹಸಿಗುತ್ತದ್ದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು