ಆತ್ಮಹತ್ಯೆ ಪರಿಹಾರವಲ್ಲ.Suicide is not a solution.

ನಮಸ್ಕಾರ ಸ್ನೇಹಿತರೆ, ದುಃಖದಿಂದ ಬರಿಯುತಿರುವ ಲೇಖನ ಮೂರುದಿನಗಳಿಂದ ಆತ್ಮಹತ್ಯೆ ಅನೋಶಬ್ದದಿಂದ ಬೇಸರವಾಗಿದೆ.ನನ್ನ ಗೆಳೆಯ ಹಾಗೆ ದೊರದವರ ಮೃತ್ಯದಿಂದ ವಿಷದವಾಗಿದೆ. 


 ಆತ್ಮಹತ್ಯೆ ಹವುದು ಆತ್ಮಹತ್ಯೆ, ಪರೀಕ್ಷೆಯಲ್ಲಿ,ಪ್ರೀತಿಯಲ್ಲಿ,ಜೀವನದಲ್ಲಿ ಹಾಗೂ ತಮ್ಮ ಕನಸುಗಳು ಈಡೇರಿಲ್ಲ ಅಂದರೆ ತನ್ನ ಪ್ರಾಣ ಪಕ್ಷಿಯನು ಗಾಳಿಯಲ್ಲಿ ಬಿಡುವ ಬುದ್ಧಿಜೀವಿಗಳೇ ನಿಮಗೆ ಹೇಳುತ್ತಿರುವುದು.

ಓಮ್ಮೆ ನೀವು ಯೋಚಿಸಿದ್ದೀರ ನಿಮ್ಮ ಗೆಳೆಯರು,ನಿಮ್ಮನ್ನೇ ನಂಬಿಕೊಂಡು ಜೀವನ ನಾಡಿಸುವ ತಂದೆ,ತಾಯಿ,ಅಕ್ಕ,ಅಣ್ಣ,ತಮ್ಮ ಹಾಗೂ ತಂಗಿ ಇವರ ಮುಂದಿನ ವಿಶ್ವಾಸ,ಜೀವನ ನಂಬಿಕೆ ಯರಮೇಲೆ.

 ತಾಯಿ 9 ತಿಂಗಳು ತನ್ನ ಕರುಳಿನಲ್ಲಿ ನೀನು ಹುಟ್ಟಿದ ಕ್ಷಣದಿಂದ ತನ್ನ ಹೃದಯದಲ್ಲಿ ಇಟ್ಕೊಂಡು ಸಾಕಿ ಸಲುಹಿ ನಿನನ್ನು 20 ವರುಷದ ಒಬ್ಬ ಪ್ರಜೆಯಾಗಿ ತನ್ನ ಮನೆಯ ಧೈರ್ಯಸ್ತಾಂಭವಾಗಿ ಸಾಕುತ್ತಾಳೆ.

 ತಂದೆ ನೀನು ಹುಟ್ಟಿದ ಪ್ರತಿನಿಮಿಷದಿಂದ ತನ್ನ ಮಗನಿಗೆ ಒಬ್ಬ ಯಾವಕೋರತೆ ಇಲ್ಲದೆ ತಾನು ಉಪವಾಸವಿದ್ದು ಮಗನ ಪ್ರತಿಯೊಂದು ಆಸೆ ಆಕಾಂಕ್ಷಿಯನು ಪೂರ್ತಿಮಾಡುತ ಸಮಾಜದ ಗಣ್ಯವ್ಯಕ್ತಿಯಗಳು ಶ್ರಮಿಸುತಾನೆ.

 ಅಕ್ಕ,ಅಣ್ಣ,ತಮ್ಮ ಹಾಗೂ ತಂಗಿ ತನ್ನ ಕುಟುಂಬದ ಒಬ್ಬ ಸದಸ್ಯನ ಜೊತೆಯಲ್ಲಿ ಸಮಾಜದ ಪ್ರತಿಯೊಂದು ಆಗು ಹೋಗುಗಳನು ತನ್ನೊಡನೆ ಬೆರೆತು ತಮಗಿಂತ ತಮ್ಮ ಸದಸ್ಯರ ಮೆಲ್ಲೆ ಪ್ರೀತಿ ಜಾಸ್ತಿಇಟ್ಟಿರುತ್ತಾರೆ.

 ಗೆಳೆಯರು ಕೇವಲ ಕೆಲವು ಗಂಟ್ಟೆಗಳ ಸ್ನೇಹದಲ್ಲಿ ತಾವು ತಮಗಿಂತ ತನ್ನ ಗೆಳೆಯ/ಗೆಳತಿಮೇಲೆ ನಂಬಿಕೆ,ಪ್ರೀತಿ,ಜೀವನ ಹಾಗೂ ಕನಸುಗಳು ಇಟಿಕೊಂಡಿರುತ್ತಾರೆ.

 ಆದರೆ ನೀನು ಇವರೆಲ್ಲರ ಪ್ರೀತಿ,ನಂಬಿಕೆ,ವಿಶ್ವಾಸ ಹಾಗೂ ಕಲಜಿನ ಮರೆತು ಕೇವಲ ಕೆಲವರ ನಿರಾಕರದಿಂದ,ಕೆಲವು ಅಂಕಗಳಿಂದ,ಸ್ವಲ್ಪ ಹಣದ ನಷ್ಟದಿಂದ ನಂಬಿದವರ ನಂಬಿಕೆದ್ರೋಹಮಾಡಿ ಯೋಚಿಸದೆ ಆತ್ಮಹತ್ಯೆ ಎಂಬ ಸಮಾದಾನವನು ಪಡೆದುಕೊಳ್ಳುತಿದಿಯ.

 ಆತ್ಮಹತ್ಯೆ ಮಾಡಿಕೊಂಡ ಮೇಲೆ ನಮ್ಮ ತಾಯಿಯ ನೋವು,ತಂದೆಯ ಧೈರ್ಯ,ಅಕ್ಕ,ಅಣ್ಣ,ತಮ್ಮ,ತಂಗಿ ಯವರ ಮಾರ್ಗದರ್ಶಿ,ಗೆಳೆಯರ ವಿಶ್ವಾಸವನು ನೆನೆಸಿಕೊಲೊಕು ನಮಗೆ ಅವಕಾಶವಿರುವುದಿಲ್ಲ.

 ಸ್ನೇಹಿತರೆ ದಯವಿಟ್ಟು ನಿಮ್ಮ ಜೀವನವನ್ನು ಕೋಣೆಗೊಳಿಸುವ ಮುಂಚೆ ಒಮ್ಮೆ ಅವರ ಬಗ್ಗೆ ಯೋಚಿಸಿ ನಿಮ್ಮ ಬಗ್ಗೆ ಯೋಚಿಸಿ.ಭವಿಷ್ಯದ ದೃಷ್ಟಿಯಿಂದ ಒಂದು ಕ್ಷಣ ನಿಮ್ಮ ಜೀವನವನ್ನು ನಿಮ್ಮನ್ನು ನಂಬಿದವರ ಗಮನಕ್ಕೆ ತನಿ ಅವರ ಮಾತು ಕೇಳ್ಳಿ.

 ಧನ್ಯವಾದಗಳು.
ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು