(ಮೈಸೂರಿನ ಹುಲಿ ಟಿಪ್ಪು ಸುಲ್ತಾನ್)
ಟಿಪ್ಪು ಸುಲ್ತಾನ್ ಎಂಬುದು ಕೇವಲ ದೊರೆ ಅಥವಾಸಾಮಂತನೊಬ್ಬನ ಹೆಸರು ಮಾತ್ರವಲ್ಲ, ಅದು ಅಖಂಡಭಾರತದ ಕನಸಿನ, ಶೌರ್ಯದ, ಧರ್ಮ ಸಹಿಷ್ಣುತೆಯ, ಮಾದರಿಆಡಳಿತದ ಹೀಗೆ ಹಲವು ಸಂಗಮಗಳ ಪ್ರತೀಕ. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಪೂರ್ವದ ಭಾರತ ದೇಶ ಕಂಡ ಒಬ್ಬ ಅಪ್ರತಿಮ ವೀರಸೇನಾನಿ ಹಾಗೂ ಶ್ರೀರಂಗಪಟ್ಟಣದ ದೊರೆ ಮಾತ್ರವಾಗಿರದೆ, ಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯಲ್ಲಿ ನಲುಗುತ್ತಿದ್ದಭಾರತವನ್ನು ಅವರ ಕಪಿಮುಷ್ಟಿಯಿಂದ ಬಿಡಿಸಲು ಕನಸುಕಂಡು ನಿರಂತರ ಅವರೊಂದಿಗೆ ಸೆಣಸಿದ ಕನಸುಗಾರ. ಜೊತೆಗೆಹಗಲಿರುಳು ಬ್ರಿಟಿಷರನ್ನು ದುಃಸ್ವಪ್ನದಂತೆ ನಿರಂತರ ಕಾಡಿದಅಪ್ರತಿಮ ವೀರ. ಸಾಮಾನ್ಯ ಸಿಪಾಯಿಯೊಬ್ಬನ ಪುತ್ರನಾಗಿಜನಿಸಿದ ಟಿಪ್ಪು ಸುಲ್ತಾನ್, ಒಬ್ಬ ದೊರೆಯಾಗಿದ್ದುಕೊಂಡುಯುದ್ಧಭೂಮಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ಮಡಿದು ಹುತಾತ್ಮನಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಾ ಯೋಧ. ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಮೈಸೂರುಸೇನೆಗೆ ತನ್ನ ಯುದ್ಧ ತಂತ್ರ, ಸಂಘಟನಾ ಚಾತುರ್ಯದಿಂದಾಗಿÀ ಹೈದರ್ ಆಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಇಬ್ಬರೂಜಾಗತಿಕ ಮನ್ನಣೆ ದೊರಕಿಸಿಕೊಟ್ಟರು. ಅಷ್ಟು ಮಾತ್ರವಲ್ಲದೆ, ಸಿರಿ ಸಂಪತ್ತು, ನೆಮ್ಮದಿ, ಸಹ ಬಾಳ್ವೆ, ಧರ್ಮ ಸಹಿಷ್ಣುತೆಯಲ್ಲಿಮೈಸೂರು ಸಂಸ್ಥಾನವನ್ನು ಭಾರತದಲ್ಲಿ ಉತ್ತುಂಗಕ್ಕೇರಿಸಿದಮಹಾನ್ ಮಾನವತಾವಾದಿಗಳು.
ಟಿಪ್ಪು ಸುಲ್ತಾನ್ ಮಡಿದು ಎರಡು ಶತಮಾನ ಕಳೆದರೂ ಸಹಇಂದಿಗೂ ತನ್ನ ಹದಿನಾರು ವರ್ಷದ ಅರ್ಥಪೂರ್ಣ ಹಾಗೂಘನತೆಯ ಆಳ್ವಿಕೆ ಮತ್ತು ಶೌರ್ಯ ಇವುಗಳ ಮೂಲಕಪ್ರಾತಃಸ್ಮರಣೀಯನಾಗಿದ್ದಾನೆ. ಇದಕ್ಕಿಂತ ಹೆಚ್ಚಾಗಿಬ್ರಿಟಿಷರೊಡನೆ ಕಾದಾಡುತ್ತಲೇ ಭಾರತದ ಇತರೆಸಂಸ್ಥಾನಗಳನ್ನು ಒಗ್ಗೂಡಿಸಲು ಶ್ರಮಿಸಿದ ಆತನ ಕಾಳಜಿ, ಭಾರತದ ಸಂಸ್ಖøತಿ ಕುರಿತಂತೆ ಆತನಿಗಿದ್ದ ಅತೀವ ಪ್ರೀತಿ ಮತ್ತುಗೌರವಗಳಿಂದಾಗಿ ಟಿಪ್ಪು ಸುಲ್ತಾನ್ ಇವೊತ್ತಿಗೂ ಭಾರತದರಾಜಕಾರಣಕ್ಕೆ ಮಾದರಿಯಾಗಿದ್ದಾನೆ.
ದಕ್ಷಿಣ ಭಾರತದ ರಾಜಕೀಯ ಏಳು ಬೀಳುಗಳ ಇತಿಹಾಸದಲ್ಲಿಮೈಸೂರು ಸಂಸ್ಥಾನ ಅಥವಾ ಶ್ರೀರಂಗಪಟ್ಟಣದ ಹೈದರಾಲಿಹಾಗೂ ಆತನ ಪುತ್ರ ಟಿಪ್ಪು ಸುಲ್ತಾನ್ ಈ ಎರಡು ಹೆಸರುಗಳುಅಜರಾಮರವಾಗಿ ಉಳಿದು ಹೋಗಿವೆ. ಹೈದರಾಲಿಯುಯಾವುದೇ ರಾಜ ವಂಶಸ್ಥ ಕುಟುಂಬದಿಂದ ಬಂದವನಲ್ಲ. ಈಗಿನಬೆಂಗಳೂರು ಬಳಿಯ ದೇವನ ಹಳ್ಳಿಯ ಬೂದಿಕೋಟೆಯಲ್ಲಿ1721 ರಲ್ಲಿ ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದವನು. ಮನೆಯಲ್ಲಿನ ಬಡತನವನ್ನು ತಾಳಲಾರದೆ, ಆತನ ತಾಯಿಯುತನ್ನ ಸೋದರಳಿಯನಾದ ಹೈದರ್ ಸಾಬ್ ಮೂಲಕ ಮೈಸೂರುಸೇನೆಗೆ ತನ್ನ ಇಬ್ಬರು ಮಕ್ಕಳಾದ ಷಹಬಾಚ್ ಮತ್ತು ಹೈದರಾಲಿಯನ್ನು ಸೇನೆಗೆ ಸೇರಿಸಿದಳು. ಆರಂಭದ ದಿನಗಳಲ್ಲಿಮೈಸೂರು ಸೇನೆಯಲ್ಲಿ ಆನೆಯ ಮಾಹುತನಾಗಿ ಯುದ್ಧರಂಗದಮುಂಚೂಣಿಯಲ್ಲಿದ್ದು ಕೊಂಡು ಯುದ್ಧ ರಂಗದ ಕಲೆಗಳನ್ನುಕರಗತ ಮಾಡಿಕೊಂಡ ಹೈದರಾಲಿ, 1749 ರಲ್ಲಿ ಮೈಸೂರುಸೇನೆಯು ದೇವನಹಳ್ಳಿಗೆ ಮುತ್ತಿಗೆ ಹಾಕಿದಾಗ ತನ್ನಪರಾಕ್ರಮವನ್ನು ಅನಾವರಣಗೊಳಿಸುವುದರ ಮೂಲಕದೇವನಹಳ್ಳಿಯನ್ನು ಮೈಸೂರು ದೊರೆಗೆ ಗೆದ್ದು ಕೊಟ್ಟನು.

( ಹೈದರಾಲಿ)
1751 ರಲ್ಲಿ ಮೈಸೂರು ದೊರೆ ನಂಜರಾಜನು ತಿರುಚಿನಾಪಳ್ಳಿಗೆಮುತ್ತಿಗೆ ಹಾಕಿದಾಗ ಅಲ್ಲಿ ಬ್ರಿಟೀಷರ ಸೈನ್ಯದ ವಿರುದ್ಧ ಮೈಸೂರುಸೇನೆಗೆ ಸೋಲುಂಟಾಯಿತು. ಆದರೆ, ಈ ಯುದ್ಧದಲ್ಲಿಹೈದರಾಲಿಗೆ ಯುರೋಪಿಯನ್ನರ ಯುದ್ಧ ತಂತ್ರ, ಕೌಶಲ್ಯಹಾಗೂ ಬಂದೂಕು, ಪಿರಂಗಿಗಳ ಬಳಕೆಯ ಪರಿಚಯವಾಯಿತು.ಬಡತನದ ಕಾರಣ ಅನಕ್ಷರಸ್ಥನಾಗಿದ್ದ ಹೈದರಾಲಿಯುವಿಷಯಗಳನ್ನು ಗ್ರಹಿಸುವುದರಲ್ಲಿ ಸೂಕ್ಷ್ಮ ಹಾಗೂಚತುರಮತಿಯಾಗಿದ್ದನು. ಈ ಸೋಲಿನಿಂದಾಗಿ ಮೈಸೂರುಸಂಸ್ಥಾನದಲ್ಲಿ ಅರಾಜಕತೆ ಉಂಟಾದ ಕಾರಣ, ವಂಶಪಾರಂಪರ್ಯವಾಗಿ ದಳವಾಯಿ ಹಾಗೂ ಮಂತ್ರಿ ಸ್ಥಾನಪಡೆಯುತ್ತಿದ್ದ ಕೆಲವು ವ್ಯೆಕ್ತಿಗಳ ಕೈಯಲ್ಲಿ ಅಧಿಕಾರದಕೇಂದ್ರೀಕೃತವಾಯಿತು, ಇದರಿಂದ ಬೇಸತ್ತ ಹೈದರಾಲಿಯು1761 ರಲ್ಲಿ ಕ್ಷಿಪ್ರ ಕ್ರಾಂತಿಯಮೂಲಕ ಮೈಸೂರು ಅರಮನೆಯಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು. ಆ ವೇಳೆಗೆಸೇನೆಯ ದಂಡನಾಯಕನ ಸ್ಥಾನದಲ್ಲಿದ್ದ ಹೈದರಾಲಿ ತಾನುಮೈಸೂರು ಸಂಸ್ಥಾನದ ದೊರೆ ಅಥವಾ ಒಡೆಯ ಎಂದುಘೋಷಿಸಿಕೊಳ್ಳದೆ, ಯಾವುದೇ ರೀತಿಯ ರಾಜ ಪೋಷಾಕುಧರಿಸದೆ, ಮೈಸೂರು ದೊರೆಯನ್ನು ಸಿಂಹಾಸನದ ಮೇಲೆಕೂರಿಸಿ, ತಾನು ರಾಜ ಕಾರ್ಯಕರ್ತ ಅಂದರೆ, ರಾಜನ ಪ್ರಧಾನಮಂತ್ರಿ ಮತ್ತು ಸೇನಾಧಿಪತಿ ಎಂದು ಬಹಿರಂಗವಾಗಿಘೋಷಿಸಿಕೊಂಡನು. ಪ್ರತಿ ವರ್ಷ ಪಾರಂಪರಿಕವಾಗಿನಡೆದುಕೊಂಡು ಬಂದಿದ್ದ ದಸರಾ ಹಬ್ಬದ ಆಚರಣೆಗೆ ಸಕಲಪ್ರೊತ್ಸಾಹವನ್ನು ನೀಡಿ, ತಾನೂ ಸಹ ಉತ್ಸವದಲ್ಲಿಪಾಲ್ಗೊಳ್ಳುತ್ತಿದ್ದನು. (ಮುಂದಿನ ದಿನಗಳಲ್ಲಿ ಅಂದರೆಹೈದರಾಲಿಯ ನಿಧನಾನಂತರ ತನ್ನ ತಂದೆಯ ನಿಲುವಿಗೆಭಿನ್ನವಾಗಿ ಚಿಂತಿಸಿದ ಟಿಪ್ಪು ಸುಲ್ತಾನ್ ತಾನು ಮೈಸೂರಿನಬಾದಶಹನೆಂದು ಘೋಷಿಸಿಕೊಂಡನು) ಮೈಸೂರಿನರಾಜಕೀಯ ಇತಿಹಾಸದಲ್ಲಿ ಹೈದರಾಲಿಯ ಆಡಳಿತಕ್ಕೆ ಮಹತ್ವದಸ್ಥಾನವಿದೆ. ನೆರೆಯ ಮರಾಠರು, ಹಾಗೂ ಅಕ್ಕ ಪಕ್ಕದಸಂಸ್ಥಾನಗಳ ದಾಳಿ, ಅನೀರಿಕ್ಷಿತವಾಗಿ ಎದುರಾಗುತ್ತಿದ್ದ ಬರಮತ್ತು ಅತೀವೃಷ್ಟಿಗಳ ನಡುವೆ ಮೈಸೂರು ಸಂಸ್ಥಾನವನ್ನುಸುಸ್ಥಿಯಲ್ಲಿ ಇಟ್ಟಿದ್ದನು. ಹೈದರಾಲಿಯು ಮರಣ ಹೊಂದುವವೇಳೆಗೆ ಮೈಸೂರು ಸಂಸ್ಥಾನ ವಿಸ್ತಾರಗೊಂಡು ಸುರಕ್ಷಿತವಾಗಿತ್ತು. ಉತ್ತರ ಭಾಗದ ಕೃಷ್ಣಾ ಮತ್ತು ತುಂಗಾಭದ್ರ ವರೆಗೆ ದಕ್ಷಿಣದಲ್ಲಿಕೇರಳದ ಮಲಬಾರ್ ವರೆಗೆ, ಪೂರ್ವದಲ್ಲಿ ತಮಿಳುನಾಡಿನವೆಲ್ಲೂರು ಪಶ್ಚಿಮದಲ್ಲಿ ಕೊಡಗು, ಮಂಗಳೂರು, ಭಟ್ಕಳ,ಹೊನ್ನಾವರದವರೆಗೆ ಸಾಮ್ರಾಜ್ಯ ವಿಸ್ತರಣೆಗೊಂಡಿತ್ತು.ಮೈಸೂರು ದೊರೆಗಳ ಆಳ್ವಿಕೆಯಲ್ಲಿ ವಾರ್ಷಿಕವಾಗಿ ನಲವತ್ತುಲಕ್ಷ ರೂಪಾಯಿ ಆದಾಯವಿದ್ದುದು ಹೈದರಾಲಿ ಆಳ್ವಿಕೆಯಲ್ಲಿಒಂದು ಕೋಟಿ ಹತ್ತು ಲಕ್ಷರೂಪಾಯಿವರೆಗೆ ಏರಿತ್ತು. ಚಿತ್ತೂರಿನನರಸಿಂಗರಾಯನ ಪೇಟೆ ಬಳಿ ನಡೆದ ಯುದ್ದದಲ್ಲಿಹೈದರಾಲಿಯು 1782 ರ ಡಿಸಂಬರ್ ನಲ್ಲಿ ಮೃತನಾದನು. ಈಮೊದಲು ಕೋಲಾರದ ಫತೇ ಮಹಮದ್ ಗೋರಿಯ ಬಳಿಸಮಾಧಿ ಮಾಡಲಾಗಿದ್ದ ಅವನ ಕಳೇಬರವನ್ನು ಶ್ರೀರಂಗಪಟ್ಟಣಕ್ಕೆ ತಂದು ಟಿಪ್ಪುಸುಲ್ತಾನ್ ನಿರ್ಮಿಸಿದ ಬೃಹತ್ಗೋರಿಯಲ್ಲಿ ಹೂಳಲಾಯಿತು.
ಟಿಪ್ಪುಸುಲ್ತಾನ್ ಆಡಳಿತ ಅವಧಿಯಲ್ಲಿನ ಬಹುತೇಕ ಗುಣಾತ್ಮಕಅಂಶಗಳಲ್ಲಿ ಆತನ ತಂದೆ ಹೈದರಾಲಿಯ ಪ್ರಭಾವವಿದೆ. ಹೈದರಾಲಿಯು ಉತ್ತಮ ಯೋಧ, ಆಕ್ರಮಣಶಾಲಿಮನೋಭಾವದ ವ್ಯಕ್ತಿತ್ವ, ಉತ್ತಮ ಆಡಳಿತಗಾರ, ಇವೆಲ್ಲವೂಟಿಪ್ಪುಸುಲ್ತಾನ್ ಗೆ ತಂದೆಯಿಂದ ಬಳುವಳಿಯಾಗಿ ಬಂದಿದ್ದವು. ಈ ಕಾರಣಕ್ಕಾಗಿ “ಹೈದರ್ ನಾಮ” ಕೃತಿ ರಚಿಸಿರುವ ನಲ್ಲಪ್ಪಎಂಬ ಅರಮನೆಯ ಇತಿಹಾಸಕಾರ ಹೈದರಾಲಿಯನ್ನು “ದೈವಬ್ರಹ್ಮ, ದ್ವೇಷ ರಹಿತ” ಅಂದರೆ, ಬ್ರಾಹ್ಮಣರ ಕುರಿತು ದ್ವೇಷವಿಲ್ಲದದೊರೆ ಎಂದು ಬಣ್ಣಿಸಿದ್ದಾನೆ. ಟಿಪ್ಪುಸುಲ್ತಾನ್ ಅನುಕರಿಸಿದರಾಜನೀತಿಯಲ್ಲಿ ಹೈದರಾಲಿಯ ರಾಜನೀತಿಯ ಲಕ್ಷಣಗಳನ್ನುನಾವು ಕಾಣಬಹುದಾಗಿದೆ. ಹೈದರಾಲಿಯು ತನ್ನ ಪುತ್ರ ಟಿಪ್ಪುಸುಲ್ತಾನ್ ಬರೆದ ನೀತಿ ಪಾಠದ ಪತ್ರವೊಂದು ಉತ್ತಮರಾಜ್ಯಾಡಳಿತಕ್ಕೆ ನೀಡಿದ ಸಂವಿಧಾನದಂತಿದೆ.
“ ಮಗನೇ ನಾನು ನನ್ನ ಪೂರ್ವಿಕರಿಂದ ಪಡೆಯದ ಒಂದುಸಾಮ್ರಾಜ್ಯವನ್ನು ನಿನಗೆ ಬಿಡುತ್ತಿದ್ದೇನೆ. ಹಿಂಸೆಯಿಂದ ಗಳಿಸಿದರಾಜದಂಡವು ಯಾವಾಗಲೂ ನಶ್ವರವಾದುದು. ನೀನು ನಿನ್ನರಾಜ್ಯದ ಆಂತರೀಕ ವ್ಯವಹಾರದಲ್ಲಿ ಎಳ್ಳಷ್ಟೂ ಹೆದರಬೇಕಾಗಿಲ್ಲ. ಆದರೆ, ನಿನ್ನ ದೃಷ್ಟಿಯನ್ನು ಬಹು ದೂರದವರೆಗೆ ಒಯ್ಯುವುದುಅತ್ಯಾವಶ್ಯಕ. ಮೊಗಲ್ ಸಾಮ್ರಾಜ್ಯವು ಔರಂಗಜೇಬನಪತನದಿಂದಾಗಿ ಭಾರತವು ಏಷ್ಯಾದ ಸಾಮ್ರಾಜ್ಯಗಳಲ್ಲಿ ತನ್ನಸ್ಥಾನಮಾನಗಳನ್ನು ಕಳೆದುಕೊಂಡಿದೆ. ಈ ಸುಂದರನಾಡುಅಂತಃಕಲಹದಿಂದ ಹರಿದು ಹಂಚಿ ಹೋಗಿದೆ. ಜುನರು ನಾನಾಮತಗಳಿಗೆ ಹಂಚಿ ಹೋಗಿದ್ದಾರೆ. ಹಾಗಾಗಿ ದೇಶ ಪ್ರೇಮವನ್ನುಕಳೆದುಕೊಂಡಿದ್ದಾರೆ. ಹಿಂದುಗಳು ಶಾಸ್ತ್ರಾನುಭವದಿಂದ ಪಡೆದಶಾಂತಿಸೂತ್ರದಿಂದ ಮೃದುವಾಗಿ ತಮ್ಮ ನಾಡನ್ನು ರಕ್ಷಿಸಿಕೊಳ್ಳಲುಅಸಮರ್ಥರಾಗಿದ್ದಾರೆ. ಆದ್ದರಿಂದ ಈ ನಾಡು ಪರಕೀಯರಿಗೆತುತ್ತಾಗಿದೆ. ಮಗನೇ ನಿನ್ನ ಪ್ರಯತ್ನಗಳನ್ನೆಲ್ಲಾ ಒಗ್ಗೂಡಿಸಿ ಈಗಭಾರತದಲ್ಲಿ ಸರ್ವ ಶಕ್ತರಾಗಿರುವ ಇಂಗ್ಲೀಷರನ್ನು ಯುದ್ಧದಮೂಲಕ ದುರ್ಬಲಗೊಳಿಸುವುದು ಅತ್ಯಾವಶ್ಯಕ. ಯುರೋಪಿಯನ್ನರಿಗೆ ನಿಖರವಾದ ಚಾತುರ್ಯವಿದೆ ಅವರಮೇಲೆ ಯಾವಾಗಲೂ ಅವರ ಅಸ್ತ್ರವನ್ನೇ ಉಪಯೋಗಿಸು. ಪ್ರೆಂಚರ ಸಹಾಯದಿಂದ ಮಾತ್ರ ನೀನು ಅವರನ್ನು ಮಣಿಸಬಲ್ಲೆ. ಪರಾಕ್ರಮವು ನಮ್ಮನ್ನು ಸಿಂಹಾಸನಕ್ಕೆ ಏರಿಸಬಲ್ಲದು. ಆದರೆ, ಚಕ್ರಾಧಿಪತ್ಯ ಕಾಯ್ದುಕೊಳ್ಳಲು ಅದು ಸಾಲದು. ಎಲ್ಲಕ್ಕಿಂತಮುಖ್ಯವಾಗಿ ಜನರ ಪುಕ್ಕಲುತನದಿಂದ ನಾವು ಸಿಂಹಾಸನವನ್ನುಗೆಲ್ಲಬಹುದು, ಆದರೆ ಶೀಘ್ರವಾಗಿ ಅದನ್ನು ಜನರ ಪ್ರೀತಿಗೆ, ಗೌರಕ್ಕೆ ನಾವು ಒಪ್ಪಿಸದೇ ಹೋದಲ್ಲಿ ಆ ರಾಜ್ಯವು ನಮ್ಮ ಕೈಬಿಟ್ಟು ಹೋಗಬಹುದು”
ಟಿಪ್ಪು ಸುಲ್ತಾನ್ ಗೆ ತನ್ನ ತಂದೆ ಹೈದರಾಲಿ ಹಾಕಿಕೊಟ್ಟಆಡಳಿತದ ಮಾರ್ಗದರ್ಶಿ ಸೂತ್ರಗಳು ಮೈಸೂರು ಸಂಸ್ಥಾನವನ್ನುಸದಾ ಸುಸ್ಥಿಯಲ್ಲಿಡಲು ಕಾರಣವಾದವು. ತನ್ನಆಡಳಿತಾವಧಿಯಲ್ಲಿ ಬ್ರಿಟೀಷರು ಮಾತ್ರವಲ್ಲದೆ, ಪುಣೆಯಮರಾಠು, ಹೈದರಾಬಾದಿನ ನಿಜಾಮರು, ಕೇರಳದತಿರುವಾಂಕೂರಿನ ರಾಜ ಇವರ ಜೊತೆ ನಿರಂತರ ಕಾದಾಡುತ್ತಲೇಮೈಸೂರು ಸಂಸ್ಥಾನವನ್ನು ಭಾರತದ ಇತರೆ ಸಂಸ್ಥಾನಗಳಿಗಿಂತಎತ್ತರಕ್ಕೇರಿಸಿ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆಮಾಡಿದ.
1799 ರ ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ನಂತರಆತನ ರಾಜ್ಯಾಡಳಿತ ಮತ್ತು ವ್ಯೆಕ್ತಿತ್ವ ಕುರಿತಂತೆ ಬ್ರಿಟೀಷ್ವಸಾಹತು ಶಾಹಿ ಕಾಲದ ಬ್ರಿಟೀಷ್ ಇತಿಹಾಸಕಾರರಿಂದಚರಿತ್ರೆಯನ್ನು ಸೃಷ್ಟಿಸಲಾಗಿದ್ದು, ಬಹುತೇಕ ಕೃತಿಗಳಲ್ಲಿ ಟಿಪ್ಪುಸುಲ್ತಾನ್ ನನ್ನು ಮತಾಂಧನೆಂದೂ, ಹಿಂದೂ ಧರ್ಮದದ್ವೇಷಿಯೆಂದು ಚಿತ್ರಿಸಲಾಗಿದೆ. ಇದು ಕೇವಲ ಒಂದು ಮಗ್ಗುಲಿನಚರಿತ್ರೆಯಾಗಿದೆ. ನಮ್ಮ ಮುಂದಿರುವ ಐತಿಹಾಸಿಕ ದಾಖಲೆಗಳು,ಅನೇಕ ಹಿಂದೂ ದೇವಾಲಯಗಳು, ಕ್ರೈಸ್ತ ಧರ್ಮದ ಪ್ರಾರ್ಥನಾಮಂದಿರಗಳು ಟಿಪ್ಪು ಮತ್ತು ಹೈದರಾಲಿಯ ಧರ್ಮ ಸಹಿಷ್ಣುತೆಗೆಸಾಕ್ಷಿಗಳಾಗಿವೆ. ಕೊಡಗಿನ ಕೊಡವ ಜನಾಂಗದ ಮೇಲೆ, ಕೇರಳ್ಮಲಬಾರಿನ ನಾಯರ್ ಗಳ ಮೇಲೆ ಮತ್ತು ಮಂಗಳೂರಿನಕ್ಯಾಥೊಲಿಕ್ ಪಂಗಡದ ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ನಿರ್ಧಾಕ್ಷಿಣ್ಯವಾಗಿ ನಡೆದುಕೊಂಡಿರುವುದು ನಿಜವಾದರೂ, ಅದುಯುದ್ಧ ನೀತಿಯ ಒಂದು ಅಂಗವಾಗಿದೆಯೆ ಹೊರತು, ಧರ್ಮದಹಿನ್ನಲೆಯಲ್ಲಿ ಅಲ್ಲ. ಕೇರಳದ ಕೊಚ್ಚಿನ್ ಬಂದರನ್ನು ತಿರುವಾಂಕೂರು ದೊರೆ ಬ್ರಿಟೀಷರಿಗೆ ನೀಡಿದ್ದು, ಬ್ರಿಟೀಷ್ಸೇನೆಯು ಮೈಸೂರಿನ ಮೇಲೆ ಮುತ್ತಿಗೆ ಹಾಕಲು ಪಿರಿಯಾಪಟ್ಟಣ ಬಳಿ ಬೀಡು ಬಿಟ್ಟಿದ್ದ ಸಮಯದಲ್ಲಿ ಕೊಡವರು ಅವರಿಗೆ ದಿನಸಿ, ಇನ್ನಿತರೆ ಅವಶ್ಯಕ ವಸ್ತುಗಳನ್ನುನೀಡುವುದರ ಮೂಲಕ ನೆರವಾದ್ದು ಇವೆಲ್ಲವೂ ಟಿಪ್ಪು ಸುಲ್ತಾನ್ಸಿಟ್ಟಿಗೆ ಕಾರಣವಾದ ಸಂಗತಿಗಳಾಗಿವೆ. ಕ್ರೈಸ್ತರ ಮೇಲಿನ ಸಿಟ್ಟಿಗೆಅವರು ಪರಂಗಿಯರು ಹಾಗೂ ಇಂಗ್ಲೇಂಡ್ ಮೂಲದವರುಎಂಬುವುದು ಮುಖ್ಯವಾಗಿತ್ತು.

ಟಿಪ್ಪುಸುಲ್ತಾನ್ ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿಮಾಡಿರುವ ಸಾಧನೆಯ ಹೆಜ್ಜೆ ಗುರುತುಗಳು ಇನ್ನೂ ಹಸಿರಾಗಿಉಳಿದಿವೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಹದಿನೆಂಟನೇ ಶತಮಾನದ ಕಾಲಘಟ್ಟದ ಟಿಪ್ಪು ಸುಲ್ತಾನನಿಗೆಇಂತಹ ಒಳನೋಟಗಳು ಇದ್ದವೆ? ಎಂದುಆಶ್ಚರ್ಯವಾಗುತ್ತದೆ.. ಬಹುಮುಖಿ ಸಂಸ್ಸøತಿಯ ಆರಾಧಕಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತುಧರ್ಮದಾಚೆಯ ನೆಲೆಯಲ್ಲಿ ನಿಂತು ನಾಡು ಮತ್ತು ನುಡಿಯನ್ನುಪ್ರೀತಿಸಿದವನು. ಇದಕ್ಕೆ ಮುಖ್ಯ ಕಾರಣವೆಂದರೆ, ಹೈದರಾಲಿಮತ್ತು ಟಿಪ್ಪು ಸುಲ್ತಾನ್ ಇವರ ವಂಶಸ್ಥರು ಸೂಫಿ ಸಂತ ಚಿಸ್ತಿಬಂಡೆ ನವಾಜ್ ಪರಂಪರೆಯಿಂದ ಬಂದವರಾಗಿದ್ದರು. ಟಿಪ್ಪುವಿನ ಈ ಕೆಳಗಿನ ಕ್ರಾಂತಿಕಾರಿ ಆಲೋಚನೆಗಳು ಮತ್ತುಕಾರ್ಯಗಳು ನಮಗೆ ಇಂದಿಗೂ ಮಾದರಿಯಾಗಿವೆ.
ತನ್ನ ಸಂಸ್ಥಾನದಲ್ಲಿ ಕೃಷಿಗೆ ಆಧ್ಯತೆ ನೀಡಿ ಶ್ರೀರಂಗಪಟ್ಟಣದ ಬಳಿಹರಿಯುವ ಕಾವೇರಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣಮಾಡಿದನು. ಇದೇ ಜಾಗದಲ್ಲಿ 1924 ರಲ್ಲಿ ನಾಲ್ವಡಿ ಕೃಷ್ಣರಾಜಒಡೆಯರ್ ಸರ್. ವಿಶ್ವೇಶ್ವರಯ್ಯನವರ ಮೂಲಕ ಕೃಷ್ಣರಾಜಸಾಗರ ಎಂಬ ನೂತನ ಅಣೆಕಟ್ಟು ನಿರ್ಮಾಣ ಮಾಡಿದರು.ಚೀನಾದಿಂದ ರೇಷ್ಮೆ ಆಮದಾಗುತ್ತಿದ್ದನನ್ನು ಕಂಡ ಟಿಪ್ಪು,ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ರೇಷ್ಮೆ ಬೆಳೆಯನ್ನುಪರಿಚಯಿಸಿದನು. ಜೊತೆಗೆ ತನ್ನ ತಂದೆಯ ಹೈದರಾಲಿಯಕನಸಿನಂತೆ ಬೆಂಗಳೂರು ನಗರದಲ್ಲಿ ಪ್ರಪಥಮ ಜೈವಿಕಉದ್ಯಾನವನವನ್ನು ಲಾಲ್ ಬಾಗ್ ಹೆಸರಿನಲ್ಲಿಅಭಿವೃದ್ಧಿಪಡಿಸಿದನು. ಟಿಪ್ಪು ಸುಲ್ತಾನ್ ಪರಿಚಯಿಸಿದ ಜಗತ್ತಿನವಿವಿಧ ಬಗೆಯ ಮಾವಿನ ಹಣ್ಣುಗಳ ತಳಿಯನ್ನು ಹಾಗೂಮಾವಿನ ತೋಟಗಳನ್ನು ನಾವು ಇಂದಿಗೂ ಸಹ ಟಿ.ನರಸಿಪುರಮತ್ತು ಮಳ್ಳವಳ್ಳಿ ತಾಲ್ಲೂಕಿನ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಸದಾ ಹೊಸ ತಂತ್ರಜ್ಞಾನಕ್ಕೆ ತುಡಿಯುತ್ತಿದ್ದ ಅವನು ಭಾರತದಲ್ಲಿಮೊದಲ ಬಾರಿಗೆ ಸೇನೆಯಲ್ಲಿ ಪ್ರೆಂಚರ ಸಹಾಯದಿಂದ ಕ್ಷಿಪಣಿಮತ್ತು ರಾಕೇಟ್ ಗಳನ್ನು ಬಳಸುವುದರ ಮೂಲಕ ಬ್ರಿಟೀಷರಿಗೆಸಿಂಹ ಸ್ವಪ್ನವಾದನು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆಟಿಪ್ಪುವಿಗೆ ಎಷ್ಟೊಂದು ಆಸಕ್ತಿಯಿತ್ತು ಇತ್ತು ಎಂಬುದಕ್ಕೆ 1786 ರಡಿಸಂಬರ್ 29 ರಂದು ಅವನು ಪರ್ಷಿಯನ್ ವಿದ್ವಾಂಸ ಕಾಸ್ನಿಎಂಬಾತನಿಗೆ ಪತ್ರ ಬರೆಯುತ್ತಾ “ ಯುರೋಪಿನಿಂದಬರುತ್ತಿರುವ ಪುಸ್ತಕವೊಂದು ಶಾಖ ಮಾಪಕವನ್ನು ಕುರಿತವಿಷಯವನ್ನು ಒಳಗೊಂಡಿದೆ. ಅದನ್ನು ಪರ್ಷಿಯನ್ ಭಾಷೆಗೆಅನುವಾದ ಮಾಡಿ ನನಗೆ ಕಳುಹಿಸಿಕೊಂಡು” ಎಂದುಬರೆದಿರುವ ದಾಖಲೆ ಇಂದಿಗೂ ಪತ್ರಾಗಾರದಲ್ಲಿ ಇದೆ.
ಮದ್ಯಪಾನದ ಕಡು ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ಇದರಿಂದ ಜನರ ಆರೋಗ್ಯ ಮತ್ತು ನೈತಿಕತೆ ಕುಸಿಯುತ್ತದೆಎಂದು ಬಲವಾಗಿ ನಂಬಿದ್ದ ಆ ಕಾರಣಕ್ಕಾಗಿ ವಿದೇಶಿಯರನ್ನುಹೊರತು ಪಡಿಸಿ, ಸ್ಥಳೀಯ ಜನರಿಗೆ ಮದ್ಯ ಮಾರಾಟವನ್ನುನಿಷೇಧಿಸಿದ್ದ, ಈ ಕುರಿತು 1798 ರ ಡಿಸಂಬರ್ 11 ರಂದು ರಾಲಿಎಂಬಾತನಿಗೆ ಟಿಪ್ಪು ಸುಲ್ತಾನ್ ಪತ್ರ ಬರೆದಿದ್ದಾನೆ. ನನ್ನರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ಪಾನ ನಿಷೇಧವಾಗುವುದುನನ್ನ ಹೃದಯಕ್ಕೆ ಸಂತೋಷವಾಗುವ ವಿಚಾರ ಎಂದುಬಣ್ಣಿಸಿಕೊಂಡಿದ್ದಾನೆ. ಟಿಪ್ಪು ಸುಲ್ತಾನ್ ಸೆರೆ ಹಿಡಿದ ಖೈದಿಗಳಿಗೆಚಿತ್ರ ಹಿಂಸೆ ನೀಡುತ್ತಿದ್ದ ಎಂದು ಇತಿಹಾಸದ ಪುಟಗಳಲ್ಲಿಆರೋಪಿಸಿಕೊಂಡು ಬರಲಾಗಿದೆ. ಆದರೆ, 1786 ರಲ್ಲಿ ಬ್ರಿಟನ್ಸೇನೆಯ ಮುಖಂಡ ರಾಬ್ ಸನ್ ಎಂಬಾತ ದಾಖಲಿಸಿರುವಬರೆವಣಿಗೆ ಈ ರೀತಿ ಇದೆ. “ ಟಿಪ್ಪು ಸಾಹೇಬನು ಕರ್ನಲ್ ಬ್ರೈತ್ವೈಟ್ ಮತ್ತು ಇತರೆ ಖೈದಿಗಳನ್ನು ತನ್ನ ಬಳಿ ಕರೆತರುವಂತೆಆಜ್ಞಾಪಿಸಿ ಅವರುಗಳ ಗಾಯವನ್ನು ಸ್ವತಃ ಪರೀಕ್ಷಿಸಿದನು. ನಂತರ ಗಾಯಾಳುಗಳಿಗೆ ಔಷಧೊಪಚಾರ ಮಾಡಲು ಪ್ರೆಂಚ್ವೈದ್ಯರೊಡನೆ ಹಳ್ಳಿಗಳಿಗೆ ಕಳಿಸಿಕೊಟ್ಟನು. ಖೈದಿಗಳು ಧರಿಸಲುನವಿರಾದ ಬೆಳ್ಳನೆಯ ಉಡುಪುಗಳನ್ನು ನೀಡಿದನು. ಗಾಯಗಳಿಗೆಪಟ್ಟಿ ಕಟ್ಟಲು ಒರಟು ಬಟ್ಟೆಗಳು ಮತ್ತು ಮುವತ್ತು ಪಗೋಡನಾಣ್ಯಗಳನ್ನು ನೀಡಿದನು” ಬ್ರಿಟೀಷ್ ಸೇನೆಯದಂಡನಾಯಕನನ್ನು ಟಿಪ್ಪು ಸುಲ್ತಾನ್ ಬಂಧಿಖಾನೆಯಲ್ಲಿಇಟ್ಟಿದ್ದನೇ ಹೊರತು ನೆಲಮಾಳಿಗೆಯಲ್ಲಿ ಅಲ್ಲ” ಇಂತಹ ಅನೇಕಅಮೂಲ್ಯ ದಾಖಲೆಗಳು ಟಿಪ್ಪು ಸುಲ್ತಾನನ ಮಾನವೀಯಮುಖಗಳ ಮೇಲೆ ಬೆಳಕು ಚಲ್ಲುತ್ತವೆ.
(ಶೃಂಗೇರಿಯ ಶಾರದಾಂಬೆಯ ದೇಗುಲ ಮತ್ತು ವಿಗ್ರಹ)
ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಮತ್ತು ಹಿಂದೂಗಳನ್ನುಎಷ್ಟೊಂದು ಗೌರವ ಮತ್ತು ಭಕ್ತಿಯಿಂದ ಕಾಣುತ್ತಿದ್ದ ಎಂಬುದಕ್ಕೆ1794 ರಲ್ಲಿ ರೊಡರಿಕ್ ಮೆಕನ್ಜಿ ಎಂಬಾತ ಬರೆದ ಬರೆವಣಿಗೆನಮ್ಮೆದುರು ಸಾಕ್ಷಿಯಾಗಿದೆ. ವರ್ಷವೊಂದಕ್ಕೆ ತಮಿಳುನಾಡುಒಳಗೊಂಡಂತೆ ಮೈಸೂರು ಸಂಸ್ಥಾನದಲ್ಲಿ ಒಟ್ಟು 156 ದೇವಾಸ್ಥಾನಗಳಿಗೆ ಆರ್ಥಿಕ ನೆರವು ನಿಡುತ್ತಿದ್ದ ಸಂಗತಿಗಳುದಾಖಲಾಗಿವೆ. ಕಾಂಚಿಪುರಂ ನ ದೇವಸ್ಥಾನದ ನಿರ್ಮಾಣಕ್ಕೆ 10 ಸಾವಿರ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದಸಂಗತಿ, ಮೈಸೂರಿನ ಚಾಮುಂಡೇಶ್ವರಿ ಹಾಗೂ ನಂಜನಗೂಡಿನಶ್ರೀಕಂಠೇಶ್ವರ ದೇವಸ್ಥಾನಗಳಿಗೆ ಚಿನ್ನ ಹಾಗೂ ಬೆಳ್ಳಿಯ ಪೂಜಾಸಾಮಾಗ್ರಿಗಳನ್ನು ನೀಡಿರುವ ವಿಷಯ, ಮೇಲುಕೋಟೆಯಚಲುವನಾರಾಯಣಸ್ವಾಮಿ ದೇವಸ್ಥಾನದ ಎರಡು ಪಂಗಡಗಳಆರ್ಚಕರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ, ದೇಗುಲಕ್ಕೆ ಚಿನ್ನಹಾಗೂ ಬೆಳ್ಳಿಯ ಆಭರಣಗಳನ್ನು ಕೊಡುಗೆಯಾಗಿ ನೀಡಿರುವಸಂಗತಿಗಳು ದಾಖಲಾಗಿವೆ. ಇವೆಲ್ಲಕ್ಕಿಂತ ಮುಖ್ಯವಾಗಿಮರಾಠರ ದಾಳಿಯಿಂದ ಅಂದರೆ, 1990-92 ರ ನಡುವಿನಮೂರನೆಯ ಮೈಸೂರು ಯುದ್ಧದ ಸಮಯದಲ್ಲಿ ಸರ್ದಾರ್ಪರುಶರಾಂ ಭಾವೂ ಮತ್ತು ಆತನ ಸೇನಾನಿ ಪಟವರ್ಧನಇವರುಗಳು ಬಿದನೂರು ಪ್ರಾಂತ್ಯದ ಮೇಲೆ ದಂಡೆತ್ತಿ ಬಂದಾಗಶೃಂಗೇರಿ ಶಾರದಾ ಪೀಠದ ಚಿನ್ನಾಭರಣಗಳು ಮತ್ತು ಅರವತ್ತುಲಕ್ಷ ರೂಪಾಯಿಗಳನ್ನು ದೋಚಿ, ಶಾರದೆಯ ವಿಗ್ರಹವನ್ನುಭಗ್ನಗೊಳಿಸಿದ್ದರು. ಹಾನಿಗೊಳಗಾದ ಹಾಗೂ ಜಗದ್ಗುರುಶಂಕರಾಚಾಯ್ರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠದಶಾರದೆಯ ವಿಗ್ರಹ ಮತ್ತು ದೇಗುಲ ಇವುಗಳ ದುರಸ್ತಿಗೆಅಪಾರವಾದ ನೆರವನ್ನು ನೀಡಿ ಶಾರದಾಂಬೆಯ ವಿಗ್ರಹದಪುನರ್ ಪ್ರತಿಷ್ಟಾಪನೆಗೆ ಟಿಪ್ಪು ನೆರವಾದನು. ಜೊತೆಗೆಶ್ರೀರಂಗಪಟ್ಟಣದಿಂದ ಎರಡು ನೂತನ ಪಲ್ಲಕ್ಕಿಗಳನ್ನು ಕಳುಹಿಸಿ, ಅವುಗಳಲ್ಲಿ ಒಂದನ್ನು ತಾಯಿ ಶಾರದಾಂಬೆಗೆ, ಮತ್ತೊಂದನ್ನುಜಗದ್ಗುರುಗಳು ಬಳಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದನು. ಶೃಂಗೇರಿಯ ಸುತ್ತ ಮುತ್ತ ಇದ್ದ ಬ್ರಾಹ್ಮಣರ ಅಗ್ರಹಾರಗಳಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಶೃಂಗೇರಿ ಮಠದಲ್ಲಿಪ್ರತಿನಿತ್ಯ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನ ದಾಸೋಹನಡೆಸುವಂತೆ ವಾರ್ಷಿಕ ಅನುದಾನವನ್ನು ಘೋಷಿಸಿದನು. 1793 ರಲ್ಲಿ ಶೃಂಗೇರಿಯ ಸ್ವಾಮೀಜಿ( ಶ್ರೀ ಸಚ್ಚಿದಾನಂದ ಭಾರತಿ) ಬರೆದಿರುವ ಪತ್ರದಲ್ಲಿ ಟಿಪ್ಪು ಸುಲ್ತಾನನು “ ನೀವುಜಗದ್ಗುರುಗಳು. ಲೋಕೋದ್ಧಾರಕ್ಕೂ, ಮಾನವ ಕಲ್ಯಾಣಕ್ಕೂನೀವು ಯಾವಾಗಲೂ ತಪಸ್ಸನ್ನು ಆಚರಿಸುತ್ತೀರಿ. ನಮ್ಮ ಏಳಿಗೆಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸಿ. ನಿಮ್ಮಮತಹ ಪವಿತ್ರಜೀವಿಗಳು ಯಾವ ನಾಡಿನಲ್ಲೇ ವಾಸಿಸುತ್ತಿರಲಿ, ಆ ನಾಡುಒಳ್ಳೆಯ ಮಳೆ ಬೆಳೆಗಳಿಂದ ವರ್ಧಿಸುತ್ತದೆ” ಎಂದುಪ್ರಾರ್ಥಿಸಿಕೊಂಡಿದ್ದಾನೆ. 1792 ರಿಂದ 1798 ರವರೆಗಿನಅವಧಿಯಲ್ಲಿ ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೆ ಬರೆದಿರುವಪತ್ರಗಳು ಈಗಲೂ ಸಹ ಸುರಕ್ಷಿತವಾಗಿವೆ. ಇದಕ್ಕಿಂತ ಮಹತ್ವದಸಂಗತಿಯೆಂದರೆ, ಮೈಸೂರು ನಗರದಲ್ಲಿ ಪ್ರಥಮವಾಗಿ ಕ್ರೈಸ್ತಧರ್ಮದ ಜನರ ಪ್ರಾರ್ಥನೆಗಾಗಿ ಟಿಪ್ಪು ಸುಲ್ತಾನ್ ಚರ್ಚ್ಒಂದನ್ನು ನಿರ್ಮಾಣ ಮಾಡಿರುವುದನ್ನು ಪ್ರಸ್ತಾಪಿಸಿರುವ ಬಿ.ಎ. ಸಲಟೋರ್ ಎಂಬ ವಿದ್ವಾಂಸ ಟಿಪ್ಪು ಸುಲ್ತಾನ್ ನನ್ನು “ಹಿಂದೂಧರ್ಮದ ರಕ್ಷಕ” ಎಂದು ಕರೆದಿದ್ದಾನೆ.
ಟಿಪ್ಪುವಿನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿ ಬೆಂಗಳೂರುನಗರದಲ್ಲಿ ಇರುವ ಬೇಸಿಗೆ ಅರಮನೆಗೆ ಹೊಂದಿಕೊಂಡಂತೆಇರುವ ಕೋಟೆ ಶ್ರೀ ವೆಂಕಟೇಶ್ವರ ದೇವಸ್ಥಾನ, ಅನತಿದೂರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಶ್ರೀರಾಮ ಮಂದಿರ ಇವೆಲ್ಲವೂ ಟಿಪ್ಪುವಿನ ಹೃದಯ ವೈಶಾಲ್ಯತೆಗೆಸಾಕ್ಷಿಯಾಗಿವೆ. ಅಷ್ಟೇ ಏಕೆ? 1799 ರಲ್ಲಿ ಟಿಪ್ಪು ಸುಲ್ತಾನ್ಯುದ್ಧದಲ್ಲಿ ಮಡಿದ ಸಂದರ್ಭದಲ್ಲಿ ಆತನ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದವರು ದಿವಾನ್ ಪೂರ್ಣಯ್ಯ, ಇವರುಬ್ರಾಹ್ಮಣರು ಎಂಬುದನ್ನು ನಾವು ಮರೆಯಬಾರದು. ಟಿಪ್ಪುಸುಲ್ತಾನ್ ಕೋಮುವಾದಿಯಾಗಿದ್ದರೆ, ಓರ್ವ ಬ್ರಾಹಣ ವ್ಯೆಕ್ತಿಗೆತನ್ನ ಅಸ್ಥಾನದಲ್ಲಿ ಅತ್ಯುನ್ನುತ ಹುದ್ದೆ ನೀಡಲು ಸಾಧ್ಯವಿತ್ತೆ? ಭಾರತ ಹಾಗೂ ಕರ್ನಾಟಕ ನೆಲ ಕಂಡ ಇಂತಹ ಒಬ್ಬಧೀರೋತ್ತಮನನ್ನು ಮತ್ತು ಮಹಾನ್ ಮಾನವತಾವಾದಿಯನ್ನುಸ್ಮರಣೆ ಮಾಡಿ ಗೌರವಿಸುವುದೆಂದರೆ, ಅದು ನಮ್ಮನ್ನು ನಾವುಗೌರವಿಸಿಕೊಂಡಂತೆ
ಧನ್ಯವಾದಗಳು.
ಕೃಪೆ:- ಜಗದೀಶ್ ಕೊಪ್ಪ
ಟಿಪ್ಪು ಸುಲ್ತಾನ್- ಅಖಂಡ ಭಾರತದ ಕನಸುಗಾರ
ಟಿಪ್ಪು ಯಾರು? ಟಿಪ್ಪು ಜಯಂತಿ ಯಾಕೆ ಮಾಡ್ಬೇಕು? ಎಂಬ ಪ್ರಶ್ನೆಗಳಿಗೆ ಕೆಲವು ಉತ್ತರಗಳು.

(ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಮಾಧಿಗಳು)